Monday 24 January 2022

ಹಳದಿ ಶಾಲು, ಧ್ವಜಕ್ಕೆ ಮಾತ್ರ ಅವಕಾಶ'ಜ. 26ರಂದು ಬಿಲ್ಲವ ಸಂಘಟನೆಗಳಿಂದ ‘ಗುರುವಿನ ಕಡೆಗೆ ಸ್ವಾಭಿಮಾನದ ನಡಿಗೆ’

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಹಳದಿ ಶಾಲು, ಧ್ವಜಕ್ಕೆ ಮಾತ್ರ ಅವಕಾಶ'
ಜ. 26ರಂದು ಬಿಲ್ಲವ ಸಂಘಟನೆಗಳಿಂದ ‘ಗುರುವಿನ ಕಡೆಗೆ ಸ್ವಾಭಿಮಾನದ ನಡಿಗೆ.ಮಂಗಳೂರು, ಜ. 24: ಗಣರಾಜ್ಯೋತ್ಸವ ಪರೇಡ್‌ಗೆ ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರ ನಿರಾಕರಣೆ ಖಂಡಿಸಿ ಜ.26ರಂದು ಸಮಸ್ತ ಅವಿಭಜಿತ ದ.ಕ. ಜಿಲ್ಲೆಯ ಬಿಲ್ಲವ ಸಂಘಗಳು, ಸಂಘಟನೆಗಳು ಹಾಗೂ ಬಿಲ್ಲವ ಸಮಾಜದ ವತಿಯಿಂದ ‘ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ’ವನ್ನು ಆಯೋಜಿಸಲಾಗಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ತಿಳಿಸಿದ್ದಾರೆ.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಜಾಥಾ ನಡೆಯಲಿದ್ದು, ಈ ಜಾಥಾದಲ್ಲಿ ಘೋಷಣೆಗಳಿರುವುದಿಲ್ಲ. ಯಾರ ವಿರುದ್ಧವೂ ಧಿಕ್ಕಾರ ಕೂಗಲು ಅವಕಾಶವಿಲ್ಲ. ಭಾಗವಹಿಸುವ ವಾಹನಗಳು ನಾರಾಯಣಗುರುಗಳು ಶಾಂತಿಯ ಸಂಕೇತವಾಗಿ ನೀಡಿರುವ ಹಳದಿ ಪತಾಕೆಯನ್ನು ಹಾಗೂ ಭಾಗವಹಿಸುವ ನಾರಾಯಣ ಗುರುಗಳ ಅನುಯಾಯಿಗಳು ಹಳದಿ ಶಾಲು ಮಾತ್ರ ಧರಿಸಲು ಅವಕಾಶವಿರುತ್ತದೆ ಎಂದರು.

ಕೇಂದ್ರ ಸರಕಾರದ ಸುತ್ತೋಲೆ ಪ್ರಕಾರ ಕೇರಳ ರಾಜ್ಯ ಸರಕಾರ ಕಳುಹಿಸಿದ್ದ ಸ್ತಬ್ಧಚಿತ್ರಗಳಲ್ಲಿ ಆಯ್ಕೆ ಸಮಿತಿಯು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ನಾರಾಯಣಗುರುಗಳ ಪ್ರತಿಮೆಯಿದ್ದ ಸ್ತಬ್ಧಚಿತ್ರಕ್ಕೆ ಮೆಚ್ಚುಗೆ ಸೂಚಿಸಿತ್ತು. ಆದರೆ, ನಾರಾಯಣಗುರುಗಳ ಪ್ರತಿಮೆ ತೆಗೆದು, ಶಂಕರಾರಾರ್ಯ ಬದಲಾವಣೆಗೆ ಸೂಚನೆ ನೀಡಿರುವುದು ನಾರಾಯಣಗುರುಗಳ ಅನುಯಾಯಿಗಳಿಗೆ ಆಗಿರುವ ನೋವು. ಆಯ್ಕೆ ಸಮಿತಿ ನೇರವಾಗಿ ನಿರಾಕರಿಸಿದ್ದರೆ ನಾವು ಮಾತನಾಡುತ್ತಿರಲಿಲ್ಲ. ಗಣರಾಜ್ಯೋತ್ಸವ ಪೆರೇಡ್ ದೇಶದ ಹೆಮ್ಮೆ. ಸ್ತಬ್ಧ ಚಿತ್ರಗಳನ್ನು ಆಯ್ಕೆ ಮಾಡಲು ಅದರದ್ದೇ ಆದ ಮಾನದಂಡಗಳಿವೆ. ಆದರೆ ಸ್ತಬ್ಧ ಚಿತ್ರದ ಪರಿಕಲ್ಪನೆ ಎಲ್ಲವೂ ಉತ್ತಮವಾಗಿದೆ ಎಂದು ಹೇಳಿ ಅಲ್ಲಿ ನಾರಾಯಣಗುರುಗಳ ಪ್ರತಿಮೆ ಬದಲಿಗೆ ಶಂಕರಾಚಾರ್ಯರ ಪ್ರತಿಮೆ ಹಾಕುವಂತೆ ಹೇಳಿದ್ದು, ಅವರ ಅನುಯಾಯಿಗಳಾದ ನಮಗೆ ನೋವಾಗಿದೆ. ಇದನ್ನು ಸರಿಪಡಿಸುವಂತೆ ಹೇಳಿದಾಗ ಇದನ್ನು ಸಮರ್ಥನೆ ಮಾಡುವಂತಹ ಪ್ರಯತ್ನ ನಡೆದಿದೆ. ಈ ಬಗ್ಗೆ ಕುದ್ರೋಳಿ ಕ್ಷೇತ್ರದ ನವೀಕರಣದ ರುವಾರಿ ಜನಾರ್ದನ ಪೂಜಾರಿಯವರು ಕೂಡಾ ತಮ್ಮ ನೋವನ್ನು ತೋಡಿಕೊಂಡು ಇದರ ವಿರುದ್ಧ ಧ್ವನಿ ಎತ್ತುವುದು ಅಗತ್ಯವೆಂದು ಹೇಳಿದ್ದಾರೆ.

ಆ ನಿಟ್ಟಿನಲ್ಲಿ ಜಾಥಾ ನಡೆಸಲಾಗುತ್ತಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಮಾಡಿರುವ ಕ್ರಾಂತಿ, ಶಾಂತಿಯುತ ಸಂಘರ್ಷ ರಹಿತ ಕ್ರಾಂತಿಗಳು. ಆ ಪ್ರಕಾರ ಜ. 26ರಂದು ಕರಾವಳಿ ಜಿಲ್ಲೆಗಳಲ್ಲಿ ನಾರಾಯಣಗುರು ಸ್ವಾಭಿಮಾನ ಜಾಥಾ ನಡಿಗೆ ಹಮ್ಮಿಕೊಲ್ಳಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ನಾರಾಯಣಗುರುಗಳ ಟ್ಯಾಬ್ಲೋ ಹಾಗೂ ಭಜನಾ ತಂಡಗಳು ಆಯ್ದ ಸ್ಥಳಗಳಲ್ಲಿ ಸಂಚರಿಸಿ ಸಂಜೆ 6 ಗಂಟೆಗೆ ಗೋಕರ್ಣನಾಥ ಕ್ಷೇತ್ರ ತಲುಪಲಿವೆ. ಮಂಗಳೂರಿನಿಂದ ಬಿಲ್ಲವ ಸಮುದಾಯದ ವತಿಯಿಂದ ಹೊರಡುವ ಸ್ತಬ್ಧಚಿತ್ರ ಅಂದು ಮಧ್ಯಾಹ್ನ 3 ಗಂಟೆಗೆ ಗರೋಡಿ ಕ್ಷೇತ್ರದಿಂದ ಹೊರಟು ಪಂಪವೆಲ್ ಸರ್ಕಲ್, ಕರಾವಳಿ ಜಂಕ್ಷನ್, ಅಂಬೇಡ್ಕರ್ ವೃತ್ತ ಹಾಗೂ ಹಂಪನ್‌ಕಟ್ಟ ಸಿಗ್ನಲ್‌ನಿಂದ ಕೆ.ಎಸ್.ರಾವ್ ರೋಡ್, ನವಭಾರತ್ ಸರ್ಕಲ್, ಪಿವಿಎಸ್‌ ಜಂಕ್ಷನ್, ಎಂಜಿ.ರಸ್ತೆ, ಲಾಲ್‌ಬಾಗ್, ಲೇಡಿಹಿಲ್ ಸರ್ಕಲ್ ಆಗಿ ಕ್ಷೇತ್ರಕ್ಕೆ ತಲುಪಲಿದೆ. ಬೈಂದೂರು, ಕಾರ್ಕಳ, ಉಡುಪಿ, ಮುಲ್ಕಿ, ಪುತ್ತೂರು, ಬಂಟ್ವಾಳದಿಂದ ಸಮಯ ಹೊಂದಾಣಿಕೆ ಮಾಡಿಕೊಂಡು ಒಟ್ಟು ಸೇರಿಕೊಂಡು ಕ್ಷೇತ್ರಕ್ಕೆ ತಲುಪಲಿದೆ ಎಂದು ಪದ್ಮರಾಜ್ ವಿವರಿಸಿದರು.

ನಾರಾಯಣ ಗುರು ಒಂದೇ ಮತ, ಒಂದೇ ದೇವರು ಎಂಬ ಅದ್ಭುತ ಸಂದೇಶ ನೀಡಿದವರು. ಈ ಸಮಾಜದಲ್ಲಿ ಈಗಲೂ ಅಸಮಾನತೆ ಇದೆ ಎಂಬುದು ಮೇಲ್ನೋಟಕ್ಕೆ ಎಲ್ಲರಿಗೂ ಗೊತ್ತಿದೆ, ಆಗುತ್ತಲೇ ಇದೆ. ಹಿಂದುಳಿದವರನ್ನು ತುಳಿಯುವರನ್ನು ಕೆಲಸ ಈಗಲೂ ನಡೆಯುತ್ತಿದೆ. ನಾರಾಯಣಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಗೋಕರ್ಣನಾಥ ಕ್ಷೇತ್ರದಲ್ಲಿ ನಾರಾಯಣಗುರುಗಳ ತತ್ವ, ಸಂದೇಶವನ್ನು ಅಕ್ಷರಶ: ಪಾಲಿಸುವ ಕಾರ್ಯ ಆಗುತ್ತಿದೆ. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರು ಇಲ್ಲಿ ನಾರಾಯಣಗುರುಗಳ ತತ್ವ ಸಂದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಹಗಲಿರುಳು ದುಡಿದವರು. ಇಲ್ಲಿ ಹಿಂದುಳಿದ ವರ್ಗದ ಅರ್ಚಕರೇ ಇರುವಂತದ್ದು. ಪರಿಶಿಷ್ಟ ಜಾತಿಯ ಅರ್ಚಕರನ್ನು ನೇಮಕ ಮಾಡಲಾಗಿತ್ತು, ಮಹಿಳೆಯ ಪಾದಪೂಜೆಯನ್ನೂ ಇಲ್ಲಿ ಮಾಡಲಾಗಿತ್ತು. ಮುಂದಿನ ಜನಾಂಗಕಕ್ಕೂ ನಾರಾಯಣಗುರುಗಳ ತತ್ವ ಸಂದೇಶವನ್ನು ಲೋಕಾದ್ಯಂತ ಪ್ರಚಾರ ಆಗಬೇಕು ಎಂಬುದು ನಮ್ಮ ಆಶಯ ಎಂದವರು ಹೇಳಿದರು.

ಈ ಜಾಥಾದಲ್ಲಿ ಯಾವುದೇ ರೀತಿಯ ಘೋಷಣೆ ರಹಿತವಾಗಿ ಮೌನವಾಗಿ ನಡೆಯಲಿದೆ. ಕೇವಲ ಹಳದಿ ಧ್ವಜ, ಶಾಲು ಮಾತ್ರ ಅವಕಾಶ. ಬೇರೆ ಯಾವುದೇ ಬಣ್ಣದ ಧ್ವಜ, ಶಾಲಿಗೆ ಇಲ್ಲಿ ಅವಕಾಶವಿಲ್ಲ. ಗುರುಗಳ ತತ್ವದ ಪ್ರಕಾರ ಎಲ್ಲಾ ಜಾತಿ, ಮತ, ಧರ್ಮ, ಪಕ್ಷ, ಪಂಥದ ಜಾಥಾ ಇದಾಗಲಿದೆ. ಕೇವಲ ಹಿಂದುಳಿದ ವರ್ಗ ಮಾತ್ರವಲ್ಲ ಎಲ್ಲಾ ಜಾತಿ, ಧರ್ಮಗಳವರು ಈ ಜಾಥಾದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಲ್ಲವ ಮುಖಂಡರಾದ ಸತ್ಯಜಿತ್ ಸುರತ್ಕಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷೃ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಶೈಲೇಂದ್ರ ವೈ. ಸುವರ್ಣ, ಲೀಲಾಕ್ಷ ಕರ್ಕೇರಾ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಕಂಕನಾಡಿ ಗರೋಡಿ ಮೊಕ್ತೇಸರ ದಿನೇಶ್ ಅಂಚನ್, ಕಂಕನಾಡಿ ಗರೋಡಿ ಬಿಲ್ಲವ ಸಂಘದ ಅಧ್ಯಕ್ಷ ಭರತೇಶ್, ತುಳುನಾಡ ಬಿರುವೆರ್ ಸಂಘದ ಅಧ್ಯಕ್ಷ ಲೋಕೇಶ್ ಕೋಡಿಕೆರೆ, ಬಿಲ್ಲವ ಬ್ರಿಗೇಡ್ ಸಂಸ್ಥಾಪಕ ಅವಿನಾಶ್, ಯುವವೇದಿಕೆ ಮಾಜಿ ಅಧ್ಯಕ್ಷ ಎಂ.ಎಸ್. ಕೋಟ್ಯಾನ್, ಜಪ್ಪಿನಮೊಗರು ಬಿಲ್ಲವ ಸಂಘದ ಅಧ್ಯಕ್ಷ ನಾಗಾರಾಜ್, ಮುಖಂಡರಾದ ಸಚಿನ್, ಹರಿಪ್ರಸಾದ್, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ್ ಉಪಸ್ಥಿತರಿದ್ದರು.
ವರದಿ ಕೃಪೆ :ವಾರ್ತಾಭಾರತಿ

Wednesday 6 April 2016

BYV-MANGALURU

" ಓಂ  ಶ್ರೀ ನಾರಾಯಣ ಪರಮ ಗುರುವೇ  ನಮಃ "
BYV ಸಂಘಟನೆಯು-
ಸಂಸ್ಕಾರ ,ಸಂಸ್ಕ್ರತಿ ಮತ್ತು ಆಧ್ಯಾತ್ಮ ಪರಿಕಲ್ಪನೆಯೊಂದಿಗೆ ನಮ್ಮ ಸಮಾಜವನ್ನು  ಮುನ್ನಡೆಸುವುದು   ........ ಆಂತಹ ಚಿಂತನೆಯೊಂದಿಗೆ ಹುಟ್ಟಿ ಕೊಂಡಿದೆ ಸಂಘಟನೆ. ನಮ್ಮ ಸಮಾಜದ ಜನತೆಯನು ಆಧ್ಯಾತ್ಮಮಿಕ ಚಿಂತನೆಯೊಂದಿಗೆ  ಸುಸಂಸ್ಕೃತ ಸಮಾಜವನಾಗಿ ರೂಪಿಸುದೆ ನಮ್ಮ. ಮುಖ್ಯ ಉದ್ದೇಶವಾಗಿದೆ.ಇಲ್ಲಿ ನಾವೆಲ್ಲರೂ ಪಕ್ಷ ಬೇಧ ಮರೆತು ನಮ್ಮ ಸಮಾಜದ ಒಳಿತಿಗಾಗಿ ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡುವ ತಾನೇ .......ಬನ್ನಿ ..ಸುಬ್ರಹ್ಮಣ್ಯನ ರೂಪದಲ್ಲಿ ಅವತಾರ ತಾಳಿದ..ಬ್ರಹ್ಮ  ಶ್ರೀ ನಾರಾಯಣ ಗುರುಗಳ ಸಂದೇಶದಂತೆ ಮನ್ನಡೆಯವ...........
ಎಲ್ಲರಿಗೂ ಒಳಿತಗಲಿ....ಎಲ್ಲರಿಗೊ ಬೆಳಕಗಲಿ .......

....ಎಲ್ಲರಿಗೂ ಶುಭವಾಗಲಿ

ನಿಮ್ಮೊಂದಿಗೆ ,
BYV ಸಂಘಟನೆಯ
ಪರಿಕಲ್ಪನೆಯ ಶಕ್ತಿ ಬ್ರಹ್ಮ ಶ್ರೀ  ನಾರಾಯಣ ಗುರು
--

*"ಬಿಲ್ಲವ  ಯೂಥ್ ವಿಂಗ್ "ಮಂಗಳೂರು ಇಂಡಿಯಾ*
social worker
Post Box No:132
Mangaluru-575001 India
billavayouthving@gmail.com
www.billavayouthving.blogspot.in




ಬಿಲ್ಲವ ಯೂಥ್ ವಿಂಗ್.  ಮಂಗಳೂರು  , ಇಂಡಿಯಾ 
ನಿಮಗೆ ಸಮಾಜದ ಬಡ ಜನರ ಸೇವೆ ಮಾಡಲು  ಆಸಕ್ತಿ ಇದೆಯೇ ?
ನಮ್ಮ  ಸಂಘಟನೆ ರಾಜಕೀಯ ರಹಿತವಾಗಿದೆ.  

ರಾಜಕೀಯ ರಹಿತವಾಗಿರುವ ಸಂಘಟನೆಯಲ್ಲಿ ನೀವು  ಕೆಲಸ ಮಾಡಲು ಇಚ್ಚಿಸುತೀರಾ ?...ಬನ್ನಿ ನಮ್ಮ ಜೊತೆಗೆನಾವೇಲ್ಲರೂ  ಒಟ್ಟು ಸೇರಿ ನಮ್ಮ  ಸಮಾಜದ  ಬಡ  ಜನರ ಸೇವೆ ಮಾಡುವಾ....... ಬನ್ನಿ ....  
ನಮ್ಮನು ಸಂಪರ್ಕಿಸಿ. ........ 
billavayouthving@gmail.com
ಬಿಲ್ಲವ ಯೂಥ್ ವಿಂಗ್.  ಮಂಗಳೂರು  , ಇಂಡಿಯಾ 
ನಿಮಗೆ ಸಮಾಜದ ಬಡ ಜನರ ಸೇವೆ ಮಾಡಲು  ಆಸಕ್ತಿ ಇದೆಯೇ ?
ನಮ್ಮ  ಸಂಘಟನೆ ರಾಜಕೀಯ ರಹಿತವಾಗಿದೆ.  

ರಾಜಕೀಯ ರಹಿತವಾಗಿರುವ ಸಂಘಟನೆಯಲ್ಲಿ ನೀವು  ಕೆಲಸ ಮಾಡಲು ಇಚ್ಚಿಸುತೀರಾ ?...ಬನ್ನಿ ನಮ್ಮ ಜೊತೆಗೆನಾವೇಲ್ಲರೂ  ಒಟ್ಟು ಸೇರಿ ನಮ್ಮ  ಸಮಾಜದ  ಬಡ  ಜನರ ಸೇವೆ ಮಾಡುವಾ....... ಬನ್ನಿ ....  -----------------

ಲಾಗ್ ಆನ್ :http://billavayouthving.blogspot.in ಬಿಲ್ಲವ ಯೂಥ್ ವಿಂಗ್.  ಮಂಗಳೂರು  , ಇಂಡಿಯಾ 
ನಿಮಗೆ ಸಮಾಜದ ಬಡ ಜನರ ಸೇವೆ ಮಾಡಲು  ಆಸಕ್ತಿ ಇದೆಯೇ ?
ನಮ್ಮ  ಸಂಘಟನೆ ರಾಜಕೀಯ ರಹಿತವಾಗಿದೆ.  

ರಾಜಕೀಯ ರಹಿತವಾಗಿರುವ ಸಂಘಟನೆಯಲ್ಲಿ ನೀವು  ಕೆಲಸ ಮಾಡಲು ಇಚ್ಚಿಸುತೀರಾ ?...ಬನ್ನಿ ನಮ್ಮ ಜೊತೆಗೆನಾವೇಲ್ಲರೂ  ಒಟ್ಟು ಸೇರಿ ನಮ್ಮ  ಸಮಾಜದ  ಬಡ  ಜನರ ಸೇವೆ ಮಾಡುವಾ....... ಬನ್ನಿ ....  
ನಮ್ಮನು ಸಂಪರ್ಕಿಸಿ. ........ 
billavayouthving@gmail.com